About Pranathi

Pranathi Pratishtaana is a dream project initiated by Mr. S.R Raghavendra almost 25 years ago with the sole objective of showcasing the richness and expanse of Kannada Literature and its culture.We have a formidable cultural heritage and amazing Literature. Many of us are unaware of our own cultural grandeur.

Contact Us

No. 39, SBI Housing colony,
9th C cross, I Phase, J P Nagar,
Bangalore – 560 078.

Phone : +91 94480 87875
Email : pranathiraghu@gmail.com
Web : www.pranathi.org

 ಡಿ ವಿ ಗುಂಡಪ್ಪನವರ ಪರಿಚೆಯ – ಪ್ರಣತಿ ಪ್ರತಿಷ್ಟಾನದ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗು ಮಹನೀಯರ ಲೇಖನಗಳ ಸರಣಿ –  ಭಾಗಾ 1

  • Home
  • / /
  •  ಡಿ ವಿ ಗುಂಡಪ್ಪನವರ ಪರಿಚೆಯ – ಪ್ರಣತಿ ಪ್ರತಿಷ್ಟಾನದ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗು ಮಹನೀಯರ ಲೇಖನಗಳ ಸರಣಿ –  ಭಾಗಾ 1

         ಡಿ ವಿ ಗುಂಡಪ್ಪನವರ ಪರಿಚೆಯ – ಪ್ರಣತಿ ಪ್ರತಿಷ್ಟಾನದ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗು ಮಹನೀಯರ ಲೇಖನಗಳ ಸರಣಿ

                                                                                  ಭಾಗಾ 1

                                                  ಡಿ ವಿ ಗುಂಡಪ್ಪನವರ ಪರಿಚೆಯ

DVG

ಡಿವಿಜಿ ಎಂದೇ ಪ್ರಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು, ನುಡಿದಂತೆನಡೆಯುತ್ತಿದ್ದರು, ನಡೆದಂತೆ ನುಡಿಯುತ್ತಿದ್ದರು. ಹೀಗೆ ಹೇಳುವಿದಕ್ಕೆ ಅವರು ರಚಿಸಿದಮಂಕುತಿಮ್ಮನ ಗ್ಗ ಹಾಗೂ ಅವರು ಸವೆಸಿದ ಜೀವನದಲ್ಲಿನ ಅವರ ನಡವಳಿಕೆಯೇ ಸಾಕ್ಷಿ.

ಕಗ್ಗ ಇರುವುದುಅದರ ಸತ್ವವನ್ನು/ ಸೂತ್ರವನ್ನು ನಮ್ಮ ಬಾಳಿನಲ್ಲಿ ಅಳವಡಿಸಿಕೊಳ್ಳಲು ಹಾಗೂಉತ್ತಮ ಜೀವನವನ್ನು ನಮ್ಮದನ್ನಾಗಿಸಿಕೊಳ್ಳಲು.ಇನ್ನೊಬ್ಬರಿಗೆ ಉಪದೇಶ ಮಾಡುವುದು ಸುಲಭ.ತನಗೇ  ಪರಿಸ್ಥಿತಿ ಬಂದಾಗಅದನ್ನು ಎದುರಿಸುವುದು ಕಷ್ಟ. ಆದರೆ ಗುಂಡಪ್ಪನವರು ಈ ಸ್ಥಿತಿಯನ್ನುಮೀರಿ ನಿಂತವರು. ಕವಿ ಕೆ.ಸಿ.ಶಿವಪ್ಪ ಅವರು ತಮ್ಮ ಮುದ್ದುರಾಮನ ಮನಸುಕೃತಿಯಲ್ಲಿ ಹೇಳಿದಂತೆಬದುಕಿ ಬಾಳಿದವರು ಡಿವಿಜಿ.

                                  ಬರಿ ಮಾತು ಉಪದೇಶ ತಳವಿರದ ಕೊಡದಂತೆ | ಇನಿಗಾನ ಕೇಳ್ದಂತೆ ಸದ್ದು ಗದ್ದಲದಿ ||

                                ನಡೆದು ತೋರದ ರೀತಿ ಹೆಳವ ಗಿರಿ ಹಾಯ್ದಂತೆ | ನುಡಿಯಂತೆ ನಡೆಯಿರಲಿ – ಮುದ್ದುರಾಮ.

          ಊಟದಲ್ಲಿ ಉಪ್ಪಿನಕಾಯಿ ಹೇಗೋಬದುಕಿನಲ್ಲಿ ಉಪದೇಶ ಹಾಗೆಉಪ್ಪಿನಕಾಯಿ ನಾಲಗೆಗೆ ರುಚಿ ಮಾತ್ರವಲ್ಲಜೀರ್ಣಕಾರಿಯೂ ಹೌದು.ಉಪದೇಶವಾದರೂ ಹಾಗೆಯೇಕಿವಿಗೆ ಮಾತ್ರ ಹಿತವಲ್ಲಅದನ್ನು ಅರ್ಥ ಮಾಡಿಕೊಂಡು,ಆಡಿದ ಮಾತಿಗೆ ಅನುಗುಣವಾಗಿ ಬಾಳಿನಲ್ಲಿ ನಡೆದರೆ,ಬದುಕಿಗೆ ಪರಮಹಿತ.

ಆದಿಕಾವ್ಯವೆನಿಸಿದ ಶ್ರೀಮದ್ರಾಮಾಯಣದಿಂದ ಹಿಡಿದು ಜಗತ್ತಿನ ಯಾವ ಮಹಾಕಾವ್ಯದ ಆಕಾಶವನ್ನು ನೋಡಿದರೂಅದರಲ್ಲಿಉಪದೇಶಗಳೆಂಬ ಅನೇಕ ನಕ್ಷತ್ರಗಳು ಮಿನುಗುತ್ತದಾರಿಯನ್ನು ತೋರಿಸುತ್ತಿವೆ.ಆದರೆ ಪರೋಪದೇಶಪಾಂಡಿತ್ಯವಲ್ಲಈಕಗ್ಗ.

ಶಾಲೆಯಲ್ಲಿ ಕೇವಲ ಪ್ರೌಢಶಾಲೆಯವರೆಗೆ ಮಾತ್ರ ಓದಿದ್ದರೂ, ಸ್ವಂತ ವ್ಯಾಸಂಗದಿಂದಯಾವ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಮಹಾ ಪ್ರಾಧ್ಯಾಪಕನೂ ಪಡೆದಿಲ್ಲದ ವಿದ್ಯಾ ಸಂಗ್ರಹ ಮಾಡಿದ್ದಾರೆಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಹಿಂದಿನ ಕಾಲದಲ್ಲಿ ನಮ್ಮಭಾರತೀಯ ಶಿಕ್ಷಣ ಪದ್ಧತಿ ಇದ್ದದ್ದು  ಮಟ್ಟದ್ದುಹಾಗೆಯೇ ಹಿಂದೆ ಬೇಕಾದಷ್ಟು ಜನ ಮಹಾಮಹಿಮರು ಆಗಿ ಹೋದರು ಅಂಥಹ ಶಿಕ್ಷಣ ಪಡೆದು. ಒಟ್ಟಿನಲ್ಲಿ ಡಿವಿಜಿಯವರು, ಶಾಲೆಯ ನಾಲ್ಕು ಗೋಡೆಗಳ ಒಳಗಿನದಕ್ಕಿಂತ ಹೊರಗೇ ಕಲಿತದ್ದು ಹೆಚ್ಚು.

ಇವರು ರಚಿಸಿದ ಪುಸ್ತಕಗಳು ವಿಶ್ವವಿದ್ಯಾಲಯದ ಪಠ್ಯಪುಸ್ತಕಗಳಾಗಿದ್ದವು. ಇದಕ್ಕೆ ಕಾರಣ ಅವರಸ್ವಂತ ಅಧ್ಯಯನಮತ್ತು ಅಪಾರಜೀವನಾನುಭವ.ಅವರು ರಚಿಸಿರುವ ಕೃತಿಗಳು ಬಹಳಷ್ಟಿವೆ. ಅವುಗಳಲ್ಲಿ ಕೆಲವೆಂದರೆ–ನಿವೇದನಉಮರನ ಒಸಗೆಅಂತಃಪುರ ಗೀತೆಗಳು,ಪ್ರಹಸನ ತ್ರಯೀಜ್ಞಾಪಕ ಚಿತ್ರ ಶಾಲೆರಾಜ್ಯಾಂಗ ತತ್ತ್ವಬಾಳಿಗೊಂದು ನಂಬಿಕೆಶ್ರೀಮದ್ಭಗವದ್ಗೀತಾ ತಾತ್ಪರ್ಯನಾಟಕಗಳುಋತ ಸತ್ಯಧರ್ಮ. ಪ್ರಸಿದ್ಧವಾಗಿರುವ ಇವರಮಂಕುತಿಮ್ಮನ ಕಗ್ಗ ಇಂದಿಗೂ ಜೀವಂತವಾಗಿ ಕನ್ನಡಿಗರ ಮನಸ್ಸಿನಲ್ಲಿರುವ ಕೃತಿ. ೧೯೪೩ ನೆಯ ಇಸವಿಯಲ್ಲಿಪ್ರಕಟವಾದ ಈ ಕೃತಿಎಂದೆಂದಿಗೂ ಎಲ್ಲ ದೇಶಕಾಲಗಳಿಗೂ ಅನ್ವಯಿಸುವ ಮೇರು ಕೃತಿ, ಅಂದರೆ ಸಾರ್ವಕಾಲಿಕಸಾರ್ವದೇಶಿಕಎನ್ನುವುದರಲ್ಲಿಯಾರಿಗೂ ಯಾವುದೇ ತರಹದ ಸಂಶಯವಿಲ್ಲ.

ಡಿವಿಜಿಯವರು ಹಲವಾರು ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಹೊಂದಿದ್ದರುಸಾಹಿತ್ಯ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರಪತ್ರಿಕೋದ್ಯಮಸಮಾಜನೀತಿಜೀವನ ಚರಿತ್ರೆವ್ಯವಹಾರ ನೀತಿರಾಜ್ಯಾಂಗ ಶಾಸನ ಮುಂತಾದವುಗಳುಅವರನ್ನು ಶಾಸನ ಸಭೆಯ ಪ್ರತಿನಿಧಿಯನ್ನಾಗಿ ನಮ್ಮ ಸರ್ಕಾರನಿಯೋಜಿಸಿತ್ತುಜಪಾನಿನಿಂದ ಜನ ಬಂದು ಇವರ ಸಲಹೆ ಕೇಳಿಕೊಂಡು ಹೋಗುತ್ತಿದ್ದರು.ಅವರ ತಿಳುವಳಿಕೆ ಮಟ್ಟ ಅಪಾರವಾದದ್ದುಅಷ್ಟೇ ಅಲ್ಲ,ಧರ್ಮ ಶಾಸ್ತ್ರ, ಆಧ್ಯಾತ್ಮ ವಿದ್ಯೆಗಳಲ್ಲಿಯೂ ಅವರ ಪರಿಶ್ರಮ ಗಣ್ಯವಾದದ್ದು.

ಡಿವಿಜಿ ಯವರು ಸ್ಥಿತಿವಂತರಲ್ಲದಿದ್ದರೂ ಹೃದಯ ಶ್ರೀಮಂತರುಡಿವಿಜಿ ಹೇಗೆ ಬದುಕಿ ಬಾಳಿದರು ಎನ್ನುವುದಕ್ಕೆ ಒಂದೆರಡುಘಟನೆಗಳನ್ನು ಇಲ್ಲಿ ಸ್ಮರಿಸಿಕೊಳ್ಳುವುದು ಉಚಿತ ಎನ್ನಿಸುತ್ತದೆ; ಡಿವಿಜಿ ಅವರನ್ನು ಸುಮ್ಮನೆ ಹಾಗೇ ಪದಗಳಲ್ಲಿ ಹಿಡಿದಿಡುವುದಕ್ಕಿಂತ, ಅವರದೇರಚನೆಯಾದ ಕಗ್ಗಗಳ ಮೂಲಕವೇ ಅವರನ್ನು ಪರಿಚಯಿಸಿದರೆ ಹೇಗೆ? ಇದೋ ಅದಕ್ಕೆ ತಕ್ಕ ಉದಾಹರಣೆ. ಮೊದಲನೆಯದಾಗಿ, ಜೀವನದ ಬಗ್ಗೆಅವರ ಅಭಿಮತ ಹೀಗಿತ್ತುಎಂಬುದನ್ನು ಒಂದು ನಡೆದ ಘಟನೆಯ ಮೂಲಕ ಸಾಬೀತು ಮಾಡಬಹುದು :-ಅವರು ಬದುಕಿದ್ದಾಗ ಅವರ ಬಗ್ಗೆಲೇಖನವನ್ನಾಗಲೀಸಾಕ್ಷಚಿತ್ರವನ್ನಾಗಲೀ ಮಾಡಗೊಡುತ್ತಿರಲಿಲ್ಲ. ಹೆಸರಾಂತ ಸಾಹಿತಿ ಎಲ್.ಎಸ್.ಶೇಷಗಿರಿರಾಯರು ಬಂದು ಕೇಳಿದಾಗ ಕೂಡ–“ನನ್ನನ್ನು ಕೇಳದೆಯೇ ಮಾಡಿಕೊಳ್ಳುವ ಒಂದು ಕಾಲ ಬರುತ್ತೆಅಲ್ಲಿಯವರೆಗೆ ನಿಮ್ಮಗಳ ಆಸೆಯನ್ನು ನಿಗ್ರಹ ಮಾಡಿಕೊಳ್ಳಿ ಎಂದಿದ್ದರು“.ಸೂತ್ರ ಕಗ್ಗದಲ್ಲಿ ಪ್ರಸ್ತಾಪಿತವಾಗಿದೆ –

                                    

                                          ಆರಲೆನ್ನಯ ಹೃದಯ ಕರಣಗಳ ಕಾವುಗಳು ಸೇರಲೆನ್ನಯ ಜೀವ ವಿಶ್ವಜೀವನದಲಿ ||

                                 ಧಾರುಣಿಯ ಮಡಿಲೆನ್ನ ಕೊಳಲಿಜಗ ಮರೆತಿರಲಿ ಹಾರಯಿಸು ನೀನಿಂತು – ಮಂಕುತಿಮ್ಮ || 920

ನನ್ನ ಹೃದಯದ ಇಂದ್ರಿಯಗಳ ಬಿಸಿಯು ಆರಿ ತಣ್ಣಗಾಗಲಿ, ನನ್ನ ಜೀವವು ವಿಶ್ವದ ಜೀವರಾಶಿಗಳಲ್ಲಿ ಸೇರಿಹೋಗಲಿ. ಈ ಭೂಮಿತಾಯಿಯಮಡಿಲಲ್ಲಿ ನಾನು ಶಾಶ್ವತವಾಗಿ ನಿದ್ರಿಸುವಂತಾಗಲಿ. ನನ್ನನ್ನು ಈ ಜಗತ್ತು ಮರೆತಿರಲಿ. ಈ ರೀತಿಯಾಗಿ ನೀನು ಹಾರೈಸು.

 ಇಷ್ಟೆಲ್ಲಾ ಇದ್ದರೂ ಡಿವಿಜಿ ಹೆಚ್ಚಿನ ಮಟ್ಟದ ಹಾಸ್ಯ ಪ್ರವೃತ್ತಿಯುಳ್ಳವರಾಗಿದ್ದರು, ಜೊತೆಗೆ ತಿಂಡಿಪೋತ ಕೂಡ. ಭೋಜನ ಭಾಗ್ಯಅವರದ್ದಾಗಿತ್ತುಭೋಜನ ಭಾಗ್ಯ ಎನ್ನುವುದು ಭಗವಂತ ಕೆಲವರಿಗೆ ಮಾತ್ರ ದಯಪಾಲಿಸಿರುವ ಒಂದು ಭಾಗ್ಯವೇ ಸರಿಅಂಥ ಭಾಗ್ಯವಂತರಲ್ಲಿಡಿವಿಜಿ ಕೂಡ ಒಬ್ಬರು ಎನ್ನಬಹುದುಮಹಾಭಾರತದಂಥಹ ಸೊಗಸಾದ ಕೃತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆಐದಾರು ಭಾಗ್ಯಗಳನ್ನುಗುರುತಿಸಬಹುದುಅವೆಂದರೆ

                                        ಲಕ್ಷ್ಮೀ ಭಾಗ್ಯ,  ಸರಸ್ವತೀ ಭಾಗ್ಯ , ಪುತ್ರ ಭಾಗ್ಯ ಆರೋಗ್ಯ ಭಾಗ್ಯಭೋಜನ ಭಾಗ್ಯ

          ಇವೆಲ್ಲದರಲ್ಲಿ ಭೋಜನ ಭಾಗ್ಯ ಅತಿ ವಿಶಿಷ್ಟವಾದುದುಈ ಕುರಿತು ನಡೆದ ಒಂದು ಘಟನೆ ಹೀಗಿದೆ:- ಡಿವಿಜಿ ಮತ್ತು ವ್ಯಾಸಂಗ ಗೋಷ್ಠಿಯಯುವಮಿತ್ರರೊಡನೆ ದೇವರಾಯನದುರ್ಗಕ್ಕೆ ಕಾರಿನಲ್ಲಿ ಹೊರಟಾಗ, ಇನ್ನೇನು ತುಮಕೂರು ಬಂತು ಎನ್ನುವಾಗ ಕಾರಿಗೆ ಏನೋತೊಂದರೆಯಾಯಿತು. ಅದರ ರಿಪೇರಿಯಾಗುವವರೆಗೆ ಏನು ಮಾಡುವುದು ಎಂದುಅಲ್ಲೇ ಹತ್ತಿರದಲ್ಲಿದ್ದ ಪರಿಚಯಸ್ಥರ ಮನೆಗೆ ಇವರೆಲ್ಲಾಹೋದರು.ಜೊತೆಯಲ್ಲಿದ್ದ ಟಿ.ಎನ್ ಪದ್ಮನಾಭನ್ ಅವರಿಗೆ  ಮನೆಯಲ್ಲಿ ಅದೇಕೋ ಸ್ವಲ್ಪ ಮುಜುಗರಒಳ್ಳೆಯ ಕಾಫಿ ಆತಿಥ್ಯ ಕೂಡ ಆಯ್ತು.ಇನ್ನು ಹೊರಡೋಣವೇಎಂದು ಟಿ.ಎನ್ ಪದ್ಮನಾಭನ್ಅವರು ಕೇಳಿದಾಗಡಿವಿಜಿ ಎತ್ತರದ ದನಿಯಲ್ಲಿ(ದೊಡ್ಡ ಗಂಟಲುಅವರ ಮನೆಯೊಳಗಿನಪಿಸುಮಾತು ಕೂಡ ರಸ್ತೆಗೆ ಕೇಳಿಸುತ್ತೆ) – ನಾವುಗಳು ಮನೆಗೆ ಬರುವಾಗ ಮನೆಯಾಕೆ ಅವರೆಕಾಯಿ ಸುಲಿಯುತ್ತಿದ್ದರುಅವರು ಅವರೆಕಾಳು ಉಪ್ಪಿಟ್ಟುಮಾಡಿದ್ದರೆ ನಮ್ಮನ್ನು ಸತ್ಕರಿಸಿದ ಮನೆಯವರಿಗೆ ಬೇಜಾರಾಗುವುದಿಲ್ಲವೇಎಂದರು.

          ಆಗ ಸ್ನೇಹಿತರುಡಿವಿಜಿ ಅವರಿಗೆನಿಮ್ಮದು ವಾಯು ಪ್ರಕೃತಿಅದಲ್ಲದೆ ಅವರೆಕಾಳು ಒಳ್ಳೆಯದಲ್ಲ ಅಂದರುಆಗ ಡಿವಿಜಿ ಅದಿರ್ಲಿ,ಅವರೆಕಾಳು ಸೃಷ್ಟಿಸಿದ ಬ್ರಹ್ಮ ಶುಂಠಿಮೆಣಸನ್ನೂ ಸೃಷ್ಟಿಸಿಲ್ಲವೇ ಅಂದ್ರುಅವರ ಪ್ರತೀಕ್ಷೆ ವ್ಯರ್ಥವಾಗಲಿಲ್ಲ. ಇರಲಿ,  ಸನ್ನಿವೇಶಕ್ಕಾಗಿಯೋ ಏನೋಎಂಬಂತೆ ಸಾಂಬಾರ ಪದಾರ್ಥಗಳನ್ನೆಲ್ಲಾ ಉಪಮೆಯ ತರಹ ಬಳಸಿಕೊಂಡುಬಾಳ್ಗೆ ಸಲುವ ತತ್ವವೊಂದನ್ನು ಜೊತೆಗೆ ಹೊಸೆದು ಕಗ್ಗದಪದ್ಯವೊಂದನ್ನು ರಚಿಸಿಟ್ಟಿದ್ದಾರೆ.

                             ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ ಅನುವಪ್ಪುದೊಂದೊಂದು ರೋಗಕೊಂದೊಂದು ||

                             ನಿನಗಮಂತೆಯೆ ನೂರು ನೀತಿಸೂತ್ರಗಳಿರಲು ಅನುವನರಿವುದೆ ಜಾಣು – ಮಂಕುತಿಮ್ಮ || ೯೩೫

ಮೆಣಸುಹಿಪ್ಪಲಿಶುಂಠಿಜೀರಿಗೆ ಇವುಗಳೆಲ್ಲವೂಒಂದೊಂದು ರೋಗಕ್ಕೆ ಗುಣಕಾರಿಗಳಾಗುತ್ತವೆಹಾಗೆಯೇ ಜೀವನದಲ್ಲಿ ನೂರಾರುನಿಯಮಗಳಿದ್ದಾಗೆಯೂನಿನಗೆ ಹೊಂದಿಕೆಯಾಗುವುದನ್ನು ತಿಳಿದುಕೊಳ್ಳುವುದೇ ಜಾಣತನ.

ಭೋಜನ ಭಾಗ್ಯ ಅಂದ್ರೆ ಇದು.ನೋಡಿಡಿವಿಜಿ ಮೆಣಸುಹಿಪ್ಪಲಿಗಳ ಉದಾಹರಣೆಯನ್ನೇ ತೆಗೆದುಕೊಂಡು ಜೀವನಕ್ಕೆ ಬೇಕಾದಜಾಣತನವನ್ನೂನಮ್ಮ ಚಿಂತನೆಗೆ ತಾಳೆಯಾಗುವಮನಕ್ಕೊಪ್ಪುವಅನ್ವಯಿಸಿಕೊಳ್ಳಬಹುದಾದ ಸೂತ್ರಗಳನ್ನು ಕೊಟ್ಟುಬಿಡುತ್ತಾರೆ.

                                                                                                                                 – ಬಿ.ಎನ್.ಅಶೋಕ್ ಕುಮಾರ್

                                                                                                                                ಎಂಜೀನೀರ್ ISRO ಬೆಂಗಳೂರು